ರಾಷ್ಟ್ರೀಯ ಉದ್ಯಾನ  - 
	ರಾಷ್ಟ್ರದ ಪ್ರಾಕೃತಿಕ ಸಂಪನ್ಮೂಲಗಳನ್ನು (ಜೈವಿಕ, ಭೌಗೋಳಿಕ, ಭೂವೈಜ್ಞಾನಿಕ) ಆ ರಾಷ್ಟ್ರದ ಹಿತದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆಯ ಸಲುವಾಗಿ, ಯುಕ್ತ ಕಾಯಿದೆಯ ಅಡಿಯಲ್ಲಿ ರಕ್ಷಿತ ಪ್ರದೇಶಗಳೆಂದು ಘೋಷಿಸಿ ಮೀಸಲಾಗಿರಿಸಿಕೊಂಡಿರುವ ಪ್ರದೇಶ (ನ್ಯಾಷನಲ್ ಪಾರ್ಕ್). ಜೈವಿಕ ಸಂಪನ್ಮೂಲಗಳಲ್ಲಿ ಆಯಾ ದೇಶದ ಸಸ್ಯವರ್ಗ, ಕಾಡುಗಳು, ವನ್ಯಜೀವಿಗಳು ಬರುತ್ತವೆ. ಭೌಗೋಳಿಕ, ಭೂವೈಜ್ಞಾನಿಕ ಸಂಪನ್ಮೂಲಗಳಲ್ಲಿ ಕೆರೆ, ನದಿ, ಸಮುದ್ರ, ಬೆಟ್ಟ ಪರ್ವತಗಳು ಸೇರುತ್ತವೆ. ಈ ರಾಷ್ಟ್ರೀಯ ಸಂಪನ್ಮೂಲಗಳ ಸಂಪೂರ್ಣ ರಕ್ಷಣೆ ಆಯಾ ಸರ್ಕಾರಗಳ ಹೊಣೆ. ಮನರಂಜನೆ, ಶೈಕ್ಷಣಿಕ ಬೆಳೆವಣಿಗೆ ಹಾಗೂ ವೈಜ್ಞಾನಿಕ ಸಂಶೋಧನೆಗಳಿಗೆ ತೆರೆದ ಬಾಗಿಲಂತಿರುವ ರಾಷ್ಟ್ರೀಯ ಉದ್ಯಾನಗಳ ಆವಶ್ಯಕತೆಯನ್ನು ಪ್ರಪಂಚದ ಬಹುತೇಕ ರಾಷ್ಟ್ರಗಳು ಮನಗಂಡು, ತಮ್ಮವೇ ಆದ ರಾಷ್ಟ್ರೀಯ ಉದ್ಯಾನಗಳನ್ನು ರೂಪಿಸಿ ಕೊಂಡಿವೆ.

	ರಾಷ್ಟ್ರೀಯ ಉದ್ಯಾನದ ನಿರ್ವಹಣೆಗೆ ಆಯಾ ರಾಷ್ಟ್ರ ಯುಕ್ತ ನಿಬಂಧನೆಗಳನ್ನು ವಿಧಿಸಿರುತ್ತದೆ. ಇಂಥ ಒಂದು ಉದ್ಯಾನ ವಿಶಾಲ ಪ್ರದೇಶವನ್ನು ಆವರಿಸಿಕೊಂಡಿರುವುದು. ಅಲ್ಲಿಯ ಗ್ರಾಮ, ಇನ್ನಿತರ ಜನವಸತಿಗಳನ್ನು ಹಾಗೂ ಅಲ್ಲಿಗೆ ಬರುವ ಪ್ರವಾಸಿಗರ ಆವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಹಾಗೂ ರಕ್ಷಣಾ ಯೋಜನೆಗಳನ್ನು ನಿರ್ವಹಿಸುತ್ತದೆ. ಕೆಲವೊಂದು ರಾಷ್ಟ್ರೀಯ ಉದ್ಯಾನಗಳಲ್ಲಿ ಅಪೂರ್ವ ಹಾಗೂ ಆದರ್ಶ ಸ್ಥಳಗಳನ್ನು ಗುರುತಿಸಿ ಅವನ್ನು ಅಪ್ಪಟ ಪ್ರಕೃತಿಧಾಮಗಳನ್ನಾಗಿ (ನೇಚರ್ ರಿಸರ್ವ್ಸ್) ರೂಪಿಸಿ, ಅಲ್ಲಿ ಮಾನವ ಹಸ್ತಕ್ಷೇಪ ಎಳ್ಳಷ್ಟೂ ಆಗದಂತೆ ಅವುಗಳ ಪರಿಪೂರ್ಣ ರಕ್ಷಣೆಯ ಭಾರವನ್ನು ಆಯಾ ಸರ್ಕಾರಗಳು ಹೊತ್ತಿವೆ.

	ಪ್ರಪಂಚದ ಮೊತ್ತಮೊದಲನೆಯ ರಾಷ್ಟ್ರೀಯ ಉದ್ಯಾನ ಎಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕ್ (1872). ಇದು ಅಮೆರಿಕ ಸಂಯುಕ್ತ ಸಂಸ್ಥಾನಗಳ ವ್ಯೋಮಿಂಗ್ ರಾಜ್ಯದಲ್ಲಿದೆ. ಅನಂತರ ಕೆನಡ (1885) ಮತ್ತು ನ್ಯೂಜಿûಲೆಂಡ್ (1887) ದೇಶಗಳಲ್ಲಿ ಇಂಥ ಉದ್ಯಾನಗಳು ಸ್ಥಾಪನೆಗೊಂಡವು. 1920-30ರ ದಶಕದಲ್ಲಿ ಯುರೋಪ್, ಏಷ್ಯ, ಆಫ್ರಿಕಖಂಡಗಳ ಅನೇಕ ರಾಷ್ಟ್ರಗಳಲ್ಲಿ ರಾಷ್ಟ್ರೀಯ ಉದ್ಯಾನಗಳನ್ನು ಸ್ಥಾಪಿಸಲಾಗಿದೆ.

ಪ್ರಪಂಚದ ಕೆಲವು ರಾಷ್ಟ್ರೀಯ ಉದ್ಯಾನಗಳು

	ರಾಷ್ಟ್ರ	ಹೆಸರು	
 	ಅಮೆರಿಕ ಸಂಯುಕ್ತ	ಎಲ್ಲೋಸ್ಟೋನ್, ಮ್ಯಾಡ್ರಿನ್ 	 	ಸಂಸ್ಥಾನಗಳು	ಐಲೆಂಡ್, ಯೋಸೆಮೈಟ್, 		ಸಿಕ್ವಾಯ, ಜನರಲ್ ಗ್ರಾಂಟ್, 			ಗ್ರ್ಯಾಂಡ್ ಕ್ಯಾನ್ಯಾನ್, ಗ್ರ್ಯಾಂಡ್ 			ಟೆಟಿನ್ 	
 	ಕೆನಡ	ಬಾಂಫ್ ಸ್ಟೇಷನ್, ಸೇಂಟ್ 			ಲಾರೆನ್ಸ್ ಐಲೆಂಡ್ (ಪ್ರಪಂಚದ 			ಅತ್ಯಂತ ಚಿಕ್ಕ ರಾಷ್ಟ್ರೀಯ 			ಉದ್ಯಾನ. ವಿಸ್ತಾರ 2.5ಚ.ಕಿಮೀ) 			ವುಡ್ ಬಫೆಲೋ (ಪ್ರಪಂಚದ 			ಅತ್ಯಂತ ದೊಡ್ಡ ರಾಷ್ಟ್ರೀಯ 			ಉದ್ಯಾನ. ವಿಸ್ತಾರ 44,807 			ಚ.ಕಿಮೀ), ಪಾಟರ್‍ಟನ್ ಲೇಕ್	 	ಇಟಲಿ	ಡಿ ಅಬ್ರುಸೋ	
 	ಕಾಂಗೋ	ಆಲ್ಬರ್ಟ್	
 	ದಕ್ಷಿಣ ಆಫ್ರಿಕ	ಕ್ರೂಗರ್	
 	ಮಯನ್ಮಾರ್ (ಬರ್ಮ)	ಕಾಚಿನ್	
	ಫಿಲಿಪೀನ್ಸ್	ಮಾಯೋನ್ ವಾಲ್ಕೆನೋ		ಶ್ರೀಲಂಕಾ	ವಿಲ್‍ಪಟ್ಟು	
	ಮಲೇಷ್ಯ	ಕಿಂಗ್ ಜಾರ್ಜ್	
	ಜ್ಹಾಂಬಿಯ	ಕೋಫುಯಿ	
	ಕೀನ್ಯ	ಅಬರ್‍ಡೇರ್	
	ಟಾನ್‍ಜಾನಿಯ	ಸೆರೆಂಗೆಟಿ
		ಲೇಕ್ ಮನ್ಯಾರ
		ಎನ್‍ಗುರೊಡೊಟೊ ಕ್ರೇಟ್
		ಮಿಕುಮಿ
		ಹವಾಯಿಯ ಹಕಕಲ	
	ನ್ಯೂಜಿûಲೆಂಡ್	ಉರೆವರ
		ಟೊಂಗಾರಿರೋ
		ವ್ಹಾಂಗ್‍ನುಯಿ
		ಎಗ್ಮಾಂಟ್
		ಎಬೆಲ ಟಾಸ್ಮನ್
		ಮೌಂಟ್ ಆಸ್ಟಿರಿಂಗ್	

ಈ ರಾಷ್ಟ್ರೀಯ ಉದ್ಯಾನಗಳ ಆಡಳಿತವನ್ನು ಸಾಮಾನ್ಯವಾಗಿ ಆಯಾ ರಾಜ್ಯಗಳ ಅರಣ್ಯ ಇಲಾಖೆಗಳು ನೋಡಿಕೊಳ್ಳುತ್ತವೆ. ಇವು ಪ್ರಾಕೃತಿಕ ರಮಣೀಯ ದೃಶ್ಯಗಳನ್ನೂ ಬಗೆಬಗೆಯ ವನ್ಯಜೀವಿಗಳನ್ನೂ ಹಲವು ರೀತಿಯ ಗಿಡಮರಗಳನ್ನೂ ಒಳಗೊಂಡಿವೆ. ವಿನಾಶದ ಅಂಚಿನಲ್ಲಿರುವ ಪ್ರಾಣಿಪ್ರಭೇದಗಳನ್ನು (ಎಂಡೇಜರ್ಡ್ ಸ್ಪೀಸೀಸ್) ಸಂರಕ್ಷಿಸುವ ಸಲುವಾಗಿ ವಿಶೇಷ ಯೋಜನೆಗಳನ್ನು ಆಯಾ ಸರ್ಕಾರಗಳು ಹಾಕಿಕೊಂಡಿವೆ. ವನ್ಯಜೀವಿಗಳ ಸಹಜ ನೆಲೆವೀಡಿನ ಸಂರಕ್ಷಣೆ, ವನ್ಯಜೀವಿ ಸಂಖ್ಯೆಯನ್ನು ಕಾಪಾಡುವುದು, ಅವುಗಳ ಸಂತಾನವೃದ್ಧಿಗೆ ಅವಕಾಶ ಒದಗಿಸುವುದು, ಗಿಡಮರಗಳ ಮತ್ತು ಪ್ರಾಣಿಪ್ರಭೇದಗಳಿಗಾಗಿ ಜೀವಗೋಳರಕ್ಷಿತ ಪ್ರದೇಶಗಳನ್ನು ಏರ್ಪಡಿಸುವುದು, ವನ್ಯಜೀವಿಗಳ ಸಂರಕ್ಷಣೆಗೆ ಯುಕ್ತ ಕಾಯಿದೆಗಳು, ಅಪೂರ್ವವೆನಿಸುವ ಗಿಡ, ಪ್ರಾಣಿಪ್ರಭೇದ ಮತ್ತು ಅವುಗಳ ಉತ್ಪನ್ನಗಳ ರಫ್ತಿಗೆ ನಿರ್ಬಂಧಗಳನ್ನು ವಿಧಿಸುವುದು, ಶಿಕ್ಷಣದ ಎಲ್ಲ ಹಂತಗಳಲ್ಲಿ ಪರಿಸರ ಸಂರಕ್ಷಣೆ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಮೊದಲಾದ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಉದ್ಯಾನಗಳ ಮೇಲ್ವಿಚಾರಣೆ ಹೊತ್ತಿರುವ ರಾಜ್ಯ ಸರ್ಕಾರಗಳು ಹಮ್ಮಿಕೊಂಡಿವೆ.

ಭಾರತದಲ್ಲಿ ಒಟ್ಟು 64 ರಾಷ್ಟ್ರೀಯ ಉದ್ಯಾನಗಳು ಮತ್ತು ಪಕ್ಷಿಧಾಮಗಳೂ ಸೇರಿದಂತೆ 331 ಅಭಯಾರಣ್ಯಗಳು ಇವೆ. ಇವುಗಳಲ್ಲಿ ಪ್ರಮುಖವಾದ ಹಲವನ್ನು ಈ ಮುಂದೆ ಕಾಣಿಸಿದೆ.	

 ರಾಜ್ಯ       ಹೆಸರು
 ಅಸ್ಸಾಮ್ 	ಕಾಜಿರಂಗ
		ಮಾನಸ್	
 ಅಂಡಮಾನ್ ದ್ವೀಪ ಸಮುದಾಯ	ಮೌಂಟ್ ಹ್ಯಾರಿಯಟ್
		ಸ್ಯಾಡಲ್ ಪೀಕ್
		ಮೆರೀನ್	
 ಉತ್ತರ ಪ್ರದೇಶ	ಕಾರ್ಬೆಟ್
		ದೂಧ್ವ
		ರಾಜಾಜಿ	
 ಒರಿಸ್ಸ		ಸಿಮ್ಲಿಪಾಲ್	
 ಕೇರಳ		ಯರವಿಕುಲಂ
		ಸೈಲೆಂಟ್ ವ್ಯಾಲಿ
		ಪೆರಿಯಾರ್	
 ಗೋವ		ಭಗವಾನ್ ಮಹಾವೀರ	 ಗುಜರಾತ್	ಗಿರ್
 		ವೆಲಾವಡರ್	
 ಜಮ್ಮು ಮತ್ತು ಕಾಶ್ಮೀರ	ಡಾಜಿûಗಮ್	
 ಪಶ್ಚಿಮ ಬಂಗಾಲ	ಸುಂದರ್‍ಬನ್	
 ಬಿಹಾರ	ಹಜಾರಿಬಾಗ್
		ಪಲಾಮ್	
 ಮಧ್ಯಪ್ರದೇಶ	ಬಂದ್ವಾಘರ್
		ಇಂದ್ರಾವತಿ
		ಕನ್ಹಾ
		ಸಂಜಯ
		ಪೆಂಚ್	
 ಮಹಾರಾಷ್ಟ್ರ	ತಡೋಬ
		ಪೆಂಚ್	
 ಮಣಿಪುರ	ಕೈಬುಲ್ ಲಾಮ್‍ಜಾವೊ	 ರಾಜಸ್ತಾನ	ಡೆಸರ್ಟ್
		ಕೆಯೊಲ್ದೇವ್ ಫಾನಾ
		ರಣ್‍ತಂಬೋರ್
		ಸಾರಿಸ್ಕ	
 ಸಿಕ್ಕಿಮ್	ಕಾಂಚನಗಂಗ	 ಹಿಮಾಚಲ ಪ್ರದೇಶ	ಗ್ರೇಟ್ ಹಿಮಾಲಯನ್

ಕರ್ನಾಟಕದಲ್ಲಿ ಐದು ರಾಷ್ಟ್ರೀಯ ಉದ್ಯಾನಗಳೂ ಪಕ್ಷಿಧಾಮಗಳೂ ಸೇರಿದಂತೆ 19 ಅಭಯಾರಣ್ಯಗಳಿವೆ. ಅವುಗಳ ಪೈಕಿ ರಾಷ್ಟ್ರೀಯ ಉದ್ಯಾನಗಳನ್ನು ಕುರಿತ ಸಂಕ್ಷಿಪ್ತ ವಿವರಗಳನ್ನು ಈ ಮುಂದೆ ಕೊಟ್ಟಿದೆ.

	ಕ್ರ.ಸಂ.	ಹೆಸರು	ಜಿಲ್ಲೆ	ಸ್ಥಾಪಿತ ವರ್ಷ 	ಸಾಮಾನ್ಯವಾಗಿ ಕಂಡುಬರುವ						ವಿಸ್ತೀರ್ಣ	ವನ್ಯಪ್ರಾಣಿಗಳು

	1 ಅಣಿಶಿ ಉತ್ತರ ಕನ್ನಡ	1987, 	ಕಾಡುಹಂದಿ, ಜಿಂಕೆ, ಕಡವೆ (ಸಾಂಬಾರ್), 						250 ಚ.ಕಿಮೀ	ಕಾಟಿ(ಕಾಡೆಮ್ಮೆ), 
                               ಆನೆ, ಚಿರತೆ, ಹುಲಿ, ನರಿ, ಪುನುಗಿನಬೆಕ್ಕು,             
                           ಚಿರತೆಬೆಕ್ಕು, ಸೀಳು ನಾಯಿ, ಹಾರುವ ಅಳಿಲು ಇತ್ಯಾದಿ.	
2	ಕುದುರೆಮುಖ ದಕ್ಷಿಣ ಕನ್ನಡ	1987,	ಕಾಡುಹಂದಿ, ಜಿಂಕೆ, ಕರಡಿ, ಕಾಡುಕುರಿ, 				
		600 ಚ.ಕಿಮೀ	ಕಡವೆ, ಮುಸಿಯ, ಸೀಳುನಾಯಿ, ಕಾಡಮ್ಮೆ, 							ಚಿರತೆ ಇತ್ಯಾದಿ.
	3 ಬಂಡೀಪುರ ಚಾಮರಾಜನಗರ (1931, 1941, 	ಕಾಡುಹಂದಿ, ಕರಡಿ, ಕಾಡುಕುರಿ, ಜಿಂಕೆ, 						1973, 1985ನೆಯ 	ಸಾಂಬಾರ್, ಸೀಳುನಾಯಿ, ಕಾಡೆಮ್ಮೆ, ಆನೆ, 					ವರ್ಷಗಳಲ್ಲಿ	ಚಿರತೆ, ಹುಲಿ, ಕತ್ತೆಕಿರುಬ, ನರಿ, ಮುಸಿಯ, 						ವಿಸ್ತರಣೆಗೊಂಡಿದೆ	ಹಾರುವ ಅಳಿಲು ಇತ್ಯಾದಿ.
			874 ಚ.ಕಿಮೀ	
	4 ಬನ್ನೇರುಘಟ್ಟ ಬೆಂಗಳೂರು	1974,104 ಚ.ಕಿಮೀ	 ಜಿಂಕೆ, ಸಾಂಬಾರ್, ಕರಡಿ, ಕಾಡುಹಂದಿ, 						  ಕಾಡುಕುರಿ, ಕಾಡೆಮ್ಮೆ, ಆನೆ ಇತ್ಯಾದಿ.	
	5	ರಾಜೀವ್‍ಗಾಂಧಿ	ಕೊಡಗು (ಭಾಗಾತ್ಮಕ) 	1983, 643 ಚ.ಕಿಮೀ	ಕರಡಿ, ಕಾಡುಹಂದಿ, ನರಿ, ಜಿಂಕೆ, ಕಾಡುಕುರಿ, 			(ನಾಗರಹೊಳೆ)	ಮೈಸೂರು (ಭಾಗಶಃ)		ಸಾಂಬಾರ್, ಸೀಳುನಾಯಿ, ಆನೆ, ಕಾಡೆಮ್ಮೆ 							ಕತ್ತೆಕಿರುಬ, ಮುಸಿಯ, ಮುಂಗಸಿ, ಚಿರತೆ, 							ಹುಲಿ ಇತ್ಯಾದಿ.	     
 (ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ